"ಪ್ರಹ್ಲಾದ" ೧೯೪೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರವಾಗಿದೆ. == ಕಥಾ ಸಾರಾಂಶ == ಹರಿ ಭಕ್ತನಾದ ಪ್ರಹ್ಲಾದ, ಹರಿಯ ಕಡು ವೈರಿಯಾದ ತಂದೆ ಹಿರಣ್ಯಕಶಿಪುವಿನ ನಡುವೆ ಸಂಘರ್ಷ. ಅಂತ್ಯದಲ್ಲಿ ಹರಿಯು ಬಾಲಕನ ಭಕ್ತಿಗೆ ಒಲಿದು ನರಸಿಂಹಾವತಾರದಲ್ಲಿ ಕಂಬದಿಂದ ಸೀಳಿ ಬಂದು ಹಿರಣ್ಯಕಶಿಪುವನ್ನು ಸಂಹರಿಸುವುದೇ ಈ ಚಿತ್ರದ ಕಥಾ ಹಂದರ. ಇದೊಂದು ಪೌರಾಣಿಕ ಕಥೆಯ ಆಧಾರಿತವಾಗಿದೆ.‌ == ವಿಶೇಷತೆ == ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ನಟ ಡಾ.ರಾಜ್‌ಕುಮಾರ ತೆರಯಲ್ಲಿ ಕಂಡಿರುವ ಮೊದಲ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ಇವರು ತಮ್ಮ ಸಹೋದರ ಎಸ್.ಪಿ.ವರದರಾಜ್‌ ಅವರೊಂದಿಗೆ ಗುರುಕುಲದ ವಿಧ್ಯಾರ್ಥಿಯಾಗಿ ಅಭಿನಯಿಸಿದ್ದಾರೆ. ಜೊತೆಗೆ ಇವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ಅಖಂಡಾಸುರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. == ನಿರ್ಮಾಣ == ನ್ಯೂಟೋನ್‌ ಹಾಗೂ ನೆಪ್ಚೂನ್‌ ಸ್ಟೂಡಿಯೋ, ಮದರಾಸಿನಲ್ಲಿ ತಯಾರಾದ ಈ ಚಿತ್ರವನ್ನು ಕಲೈವಾಣಿ ಫಿಲಂಸ್‌ ಲಾಂಛನದಲ್ಲಿ ಕೆ.ಸುಬ್ರ್ಹಮಣ್ಯಂ ನಿರ್ಮಿಸಿದರು. ಚಲನಚಿತ್ರ ಸೆನ್ಸಾರ್‌ ಆದ ಬಳಿಕ ೧೧,೦೦೦ ಅಡಿಗಳಷ್ಟು ಉದ್ದವಿತ್ತು. == ಉಲ್ಲೇಖ ==